Friday, July 17, 2009

ಅನುವಾದ ಮತ್ತು ಭಾಷಾಂತರ


ಅನುವಾದಕ್ಕೆ ಕುರಿತಂತೆ ದಿಗಂತ ಮಾಡುವ ಕೆಲಸವನ್ನು ಅನುವಾದ ಎನ್ನುವುದಕ್ಕಿಂತ ಹೆಚ್ಚಾಗಿ ರೂಪಾಂತರ ಎನ್ನಲು ಹೆಮ್ಮೆಯೆನಿಸುತ್ತದೆ. ಸ್ಥಳೀಯ ಭಾಷೆಗೆ ಪರಿವರ್ತಿಸುವ ಕೆಲಸವನ್ನು ದಿಗಂತ ಮಾಡುವಾಗ ಅದು ಆ ಸಾಹಿತ್ಯವನ್ನು ಕೇವಲ ಭಾಷಾಂತರ ಮಾಡದೆ. ಅದನ್ನು ಸ್ಥಳೀಯ ಭಾಷೆಗೆ ರೂಪಾಂತರಗೊಳಿಸುತ್ತದೆ. ನಮ್ಮಲ್ಲಿ ಉತ್ತಮ ವೃತ್ತಿಪರ ಸಾಹಿತ್ಯಿಕ ಹಾಗೂ ತಾಂತ್ರಿಕ ಸ್ಥಳೀಯ ಭಾಷೆಯ ಬರಹಗಾರರಿದ್ದು ಸಂಬಂಧಪಟ್ಟ ವಿಷಯದ ಕುರಿತು ಆಳವಾದ ಜ್ಞಾನ ಹಾಗೂ ಸ್ಥಳೀಯ ಜನರ ನಾಡಿ ಮಿಡಿತ ಬಲ್ಲವರಾಗಿದ್ದಾರೆ. ಅವರು ಯಾವುದೇ ಅನ್ಯ ಭಾಷೀಯ ವಿಷಯವನ್ನು ನಿಮ್ಮ ಅಗತ್ಯ ಭಾಷೆಗೆ ಅನುವಾದ ಮಾಡಿಕೊಡಬಲ್ಲರು. ದಿಗಂತ ಅತ್ಯುತ್ತಮವಾಗಿ ತಾಂತ್ರಿಕ, ಸಾಹಿತ್ಯಿಕ, ವೈದ್ಯಕೀಯ, ಜಾಹೀರಾತು, ಸೃಜನಾತ್ಮಕ ಅನುವಾದದಲ್ಲಿ ಉತ್ತಮ ಪರಿಣಿತಿಯನ್ನು ಹೊಂದಿದೆ.
ಅನುವಾದಿಸುವ ಭಾಷೆಗಳು: ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಬೆಂಗಾಲಿ.
ಪುಸ್ತಕ ಅನುವಾದ: ಪ್ರಕಾಶಕರು ಸಾಹಿತ್ಯಿಕ ಮತ್ತು ಸಾಹಿತ್ಯೇತರ ಅನುವಾದಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದಾಗಿದೆ.
ಭಾಷಾಂತರ: ಈ ಮೇಲೆ ತಿಳಿಸಿದ ಯಾವುದೇ ಭಾಷೆಯ ಧ್ವನಿಮುದ್ರಣವನ್ನು ದಿಗಂತ ಭಾಷಾಂತರಿಸುತ್ತದೆ.

ಜಾಹಿರಾತು ಸ್ಕ್ರಿಪ್ಟ್: ಸ್ಥಳೀಯ ಮಾರುಕಟ್ಟೆಯ ಜನರನ್ನು ಮುಟ್ಟುವಂತೆ ಜಾಹಿರಾತು ಸ್ಕ್ರಿಪ್ಟ್‌ಗಳನ್ನು ದಿಗಂತ ಭಾಷಾಂತರಿಸುತ್ತದೆ.

ಹೆಚ್ಚಿನ ವಿವರಗಳಿಗೆ: digantha media solutions ನೋಡಿ.


ದಿಗಂತ ಸಾರ್ವಜನಿಕ ಸಂಪರ್ಕ


ಇಂದಿನ ವ್ಯವಹಾರ ಜಗತ್ತಿನಲ್ಲಿ ಸಾರ್ವಜನಿಕ ಸಂಪರ್ಕ ಒಂದು ಸಂಸ್ಥೆಯ ಹಾಗೂ ಒಂದು ಉದ್ಯಮದ, ವಸ್ತುಗಳ ಕುರಿತಾದ ದೃಷ್ಟಿಕೋನವನ್ನು ಜನರಲ್ಲಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದಿಗಂತ ಸಾರ್ವಜನಿಕ ಸಂಪರ್ಕ ಅಂತರಾಷ್ಟ್ರೀಯ ಗುಣಮಟ್ಟದ ಕಂಪೆನಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಹಾಯಕವಾಗುವಂತಹ ಸಾರ್ವಜನಿಕ ಸಂಪರ್ಕ ಸೇವೆಯನ್ನು ನೀಡುತ್ತದೆ. ಸ್ಥಳಿಯ ಮಾರುಕಟ್ಟೆಯ ಕುರಿತು ಉತ್ತಮ ಸಂಶೋಧನೆಯನ್ನು ಮಾಡಿರುವ ದಿಗಂತ ಮೀಡಿಯಾ ಸೊಲ್ಯೂಷನ್ಸ್ ಅಂತರಾಷ್ಟ್ರೀಯ ಮಾರುಕಟ್ಟೆಯ ಗುಣಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ. ದಿಗಂತ ಸಾರ್ವಜನಿಕ ಸಂಪರ್ಕ ಸೇವೆಯ ಉದ್ದೇಶ ಸ್ಥಳೀಯ ಮಾರುಕಟ್ಟೆಯಲ್ಲಿ ಸಂಸ್ಥೆ ಅಥವಾ ಯಾವುದೇ ವಸ್ತುವಿನ ಕುರಿತು ಸ್ಪೂರ್ತಿದಾಯಕವಾದ, ಸ್ಥಳಿಯ ಜನರ ಮನಕ್ಕೆ ಹೊಂದುವಂತಹ ರೀತಿಯಲ್ಲಿ ಪರಿಚಯಿಸುವ ಹಾಗೂ ಅದರ ಉನ್ನತಮಟ್ಟಕ್ಕೆರಿಸುವಲ್ಲಿ ಯಶಸ್ವೀ ಸಹಾಯ ಮಾಡಬಲ್ಲುದಾಗಿದೆ.

ದಿಗಂತ ಸಾರ್ವಜನಿಕ ಸಂಪರ್ಕ ವಿಭಾಗವು ನಿಮಗೆ ಈ ಸೇವೆಗಳನ್ನು ನೀಡುತ್ತದೆ.

ಮಾದ್ಯಮ ಸಹಕಾರ
ಮಾದ್ಯಮ ಸಂಪರ್ಕ
ಪ್ರೊಡಕ್ಟ್ ಪಬ್ಲಿಸಿಟಿ
ಪತ್ರಿಕಾ ಗೋಷ್ಠಿ, ಪತ್ರಿಕಾ ಸಂವಾದ
ಪ್ರೋಫೆಷನಲ್ ಪ್ರೆಸ್ ಕಿಟ್ಸ್ ತಯಾರಿಕೆ
ಪತ್ರಿಕಾ ಪ್ರಕಟಣೆ ಮತ್ತು ವಿತರಣೆ


ಈ ಕೆಳಗಿನ ಕ್ಷೇತ್ರಗಳಲ್ಲಿ ಪರಿಣತಿ:

ವ್ಯವಹಾರವನ್ನು ಮನರಂಜನೆ ಉದ್ಯಮ ಸಾರ್ವಜನಿಕ ಸಂಪರ್ಕ
ಶೈಕ್ಷಣಿಕ ಉದ್ಯಮ ಸಾರ್ವಜನಿಕ ಸಂಪರ್ಕ
ಗ್ರಾಮೀಣ ಸಾರ್ವಜನಿಕ ಸಂಪರ್ಕ
ಆರೋಗ್ಯ ಉದ್ಯಮ ಸಾರ್ವಜನಿಕ ಸಂಪರ್ಕ

ಹೆಚ್ಚಿನ ವಿವರಗಳಿಗೆ: digantha media solutions ನೋಡಿ.


ನಮ್ಮ ಸೇವೆಗಳು


ಹೆಚ್ಚಿನ ವಿವರಗಳಿಗೆ: digantha media solutions ನೋಡಿ.



ಮಾಧ್ಯಮ ಮಾನವ ಸಂಪನ್ಮೂಲ ಸೇವೆ


ಕರ್ನಾಟಕದಲ್ಲಿ ಮೊಟ್ಟ ಮೊದಲಬಾರಿಗೆ ದಿಗಂತ ಮೀಡಿಯಾ ಸೊಲ್ಯೂಷನ್ಸ್ ಮಾಧ್ಯಮಕ್ಕೆ ಸಂಬಂದಿಸಿದ ಮಾನವ ಸಂಪನ್ಮೂಲವನ್ನು/ಪ್ರತಿಭೆಯನ್ನು ಒದಗಿಸುವ ಕೆಲಸ ಮಾಡುತ್ತಿದೆ. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಶ್ರವ್ಯ ಮಾಧ್ಯಮಕ್ಕೆ ಬೇಕಾಗುವ ತಾಂತ್ರಿಕ/ತಾಂತ್ರಿಕವಲ್ಲದ ಪ್ರತಿಭೆಗಳನ್ನು ಒದಗಿಸುವ ಕೆಲಸ ದಿಗಂತ ಮೀಡಿಯಾ ಸೊಲ್ಯೂಷನ್ಸ್ ಮಾಡುತ್ತಿದೆ. ವಿವಿಧ ಮಾಧ್ಯಮಗಳಲ್ಲಿ ಸಾಕಷ್ಟು ಅನುಭವವಿರುವ ಹಾಗೂ ಅನುಭವವಿರದ ರಾಜ್ಯದ ಎಲ್ಲಾ ಮಾಧ್ಯಮ ಸಂಬಂಧಿ ಕಾಲೇಜು/ವಿಶ್ವವಿದ್ಯಾಲಯಗಳಿಂದ ಹೊರ ಬರುವವವರ ವಿವರಗಳನ್ನು ಹಾಗೂ ಉದ್ಯೋಗ ಆಕಾಂಕ್ಷಿಗಳ ವಿವರಗಳು ಏಕಕಾಲದಲ್ಲಿ ಈ ಸೇವೆಯಲ್ಲಿ ಲಭ್ಯವಿದೆ.

ದಿಗಂತ ಇದಲ್ಲದೆ ಕ್ಯಾಂಪಸ್ ಸಂದರ್ಶನ, ಲಿಖಿತ ಪರೀಕ್ಷೆಗಳನ್ನು ಏರ್ಪಡಿಸುತ್ತದೆ.

ಹೆಚ್ಚಿನ ವಿವರಗಳಿಗೆ: digantha media solutions ನೋಡಿ.



ಸಂಪರ್ಕಿಸಿ :






ದೂರವಾಣಿ: 080-23159224
ಮೊಬೈಲ್: 09844049489/09901104199
ಇ-ಮೇಲ್ : diganthams@gmail.com

ವಿಳಾಸ:
ದಿಗಂತ ಮೀಡಿಯಾ ಸೊಲ್ಯೂಷನ್ಸ್
ನಂ ೪೩/೪, ೩ ನೇ ಮುಖ್ಯ ರಸ್ತೆ
೨೨ನೇ ಕ್ರಾಸ್
ಗೋವಿಂದರಾಜ್ ನಗರ
ಬೆಂಗಳೂರು-೪೦

ಹೆಚ್ಚಿನ ವಿವರಗಳಿಗೆ: digantha media solutions ನೋಡಿ.



ದೃಶ್ಯ ಹಾಗೂ ಶ್ರವ್ಯ ಮಾಧ್ಯಮ ಕಾರ್ಯಕ್ರಮ ಪರಿಕಲ್ಪನೆಗಳ ಸಿಂಡಿಕೇಟ್ ಮತ್ತು ಸ್ಕ್ರಿಪ್ಟ್


ದಿಗಂತ ಭಾರತದಲ್ಲೇ ಮೊದಲ ಬಾರಿಗೆ ದೃಶ್ಯ ಹಾಗೂ ಶ್ರವ್ಯ ಮಾಧ್ಯಮಕ್ಕೆ ಸಂಬಂಧಿಸಿದಂತೆ ಪರಿಕಲ್ಪನೆಗಳನ್ನು ಒಟ್ಟುಗೂಡಿಸುವ ಕಾರ್ಯವನ್ನು ಕೈಗೊಂಡಿದೆ. ದೇಶದ ವಿವಿಧ ಭಾಗಗಳ ಇತ್ತೀಚಿನ ಎಲ್ಲ ದೃಶ್ಯ ಮಾಧ್ಯಮದ ಮಾರುಕಟ್ಟೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪರಿಕಲ್ಪನೆಗಳನ್ನು ರೂಪಿಸುವ ಕಾರ್ಯವನ್ನು ಪ್ರಾರಂಭಿಸಿದೆ. ನಮ್ಮಲ್ಲಿರುವ ಕಾರ್ಯಕ್ರಮ ಪರಿಕಲ್ಪನೆಗಳು ಇತ್ತೀಚಿನ ಯುವ ಹಾಗೂ ದೃಶ್ಯ ಮಾಧ್ಯಮದ ನೋಡುಗರು ಮತ್ತು ಶ್ರವ್ಯ ಮಾಧ್ಯಮದ ಕೇಳುಗರನ್ನು ಗಮನದಲ್ಲಿರಿಸಿಕೊಂಡು ರೂಪಿಸಲ್ಪಟ್ಟಿವೆ.

ನಮ್ಮ ಪರಿಕಲ್ಪನೆಗಳು ದೀರ್ಘವಾದ ಮಾರುಕಟ್ಟೆ ಸಂಶೋಧನೆಯ ನಂತರ ರೂಪಿಸಲ್ಪಟ್ಟಿವೆ. ಆಯಾ ಸ್ಥಳದ ಜನರ ಅಭಿರುಚಿ ಹಾಗೂ ಅವರ ಜೀವನ ವಿಧಾನವನ್ನು ಸಂಪೂರ್ಣ ಗಮನದಲ್ಲಿರಿಸಿಕೊಂಡು ರಚಿಸಲಾಗಿರುತ್ತದೆ. ದಿಗಂತದಲ್ಲಿಯ ಪ್ರತಿಯೊಂದು ಪರಿಕಲ್ಪನೆಯೂ ಕೂಡಾ ಉತ್ತಮ ಮಾರುಕಟ್ಟೆ ಹಾಗೂ ಬ್ರಾಂಡಿಂಗ್ ಅವಕಾಶವನ್ನು ಹೊಂದಿರುವಂತೆ ನೋಡಿಕೊಳ್ಳಲಾಗುತ್ತದೆ.

ಜಾಹಿರಾತು ಪರಿಕಲ್ಪನೆ ಮತ್ತು ಸ್ಕ್ರಿಪ್ಟ್: ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕಂಪೆನಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ತಮ್ಮ ವ್ಯವಹಾರವನ್ನು ಅಭಿವೃದ್ದಿಗೊಳಿಸಲು ಉತ್ತಮವಾದ ಹಾಗೂ ಸ್ಥಳೀಯ ಮಾರುಕಟ್ಟೆಯ ಮೂಲಗ್ರಾಹಕರನ್ನು ತಲುಪಲು ಅಗತ್ಯವಾದ ಸ್ಥಳೀಯ ಅಂಶಹೊಂದಿರುವ ಮಾರುಕಟ್ಟೆ ಆಧಾರಿತ ಪರಿಕಲ್ಪನೆಗಳನ್ನು ದಿಗಂತ ನಿಡುತ್ತದೆ. ಸ್ಥಳೀಯ ಮಾರುಕಟ್ಟೆಯ ಮೂಲ ಗ್ರಾಹಕರನ್ನು ತಲುಪಲು ಅಂತರಾಷ್ರ್ಟೀಯ ಬ್ರಾಂಡ್‌ಗಳು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ದಿಗಂತ ಮಿಡಿಯಾ ಸೊಲ್ಯೂಷನ್ಸ್‌ನ ಈ ಸೇವೆಯು ಸಹಾಯಕವಾಗುತ್ತದೆ.

ಹೆಚ್ಚಿನ ವಿವರಗಳಿಗೆ: digantha media solutions ನೋಡಿ.



ಬ್ರಾಂಡ್ ಪ್ರಚಾರಸೇವೆ


ನಾವು ಕೇವಲ ಮಾಧ್ಯಮಗಳಲ್ಲಿ ನಿಮ್ಮ ಸುದ್ಧಿಯನ್ನು ತರುವುದಕ್ಕಾಗಿ ಕೆಲಸ ಮಾಡುವುದಿಲ್ಲ, ಹೊರತಾಗಿ ನಿಮ್ಮ ಬ್ರಾಂಡ್ ಬೆಳೆಯುವುದಕ್ಕಾಗಿ ನಾವು ಕೆಲಸ ಮಾಡುತ್ತೇವೆ.

ಹೆಸರಲ್ಲೇ ಎಲ್ಲ ಇದೆ, ಏಕೆಂದರೆ ಹೆಸರು ಮಾರಾಟ ಹೆಚ್ಚಿಸುತ್ತದೆ. ಉಳಿದೆಲ್ಲವುಗಳಿಗಿಂತ ಉತ್ತಮವಾಗಿರುವುದೇ ಯಾವುದೇ ಬ್ರಾಂಡ್‌ಗೂ ತನ್ನ ಹೆಸರನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳಲು ಸಹಾಯಕವಾಗುತ್ತದೆ. ದಿಗಂತ ಬ್ರಾಂಡ್ ಪ್ರಮೋಷನ್ಸ್ ಸೇವೆಯು ಮಾರುಕಟ್ಟೆಯಲ್ಲಿ ನಿಮ್ಮ ಸಂಸ್ಥೆಯ/ಉತ್ಪನ್ನದ ಹೆಸರು ಉತ್ತಮ ಮಟ್ಟದಲ್ಲಿರುವಂತೆ ಕಾಯ್ದುಕೊಳ್ಳಲು ಸಹಾಯಮಾಡುತ್ತದೆ. ಹಾಗೆಯೆ ನಿಮ್ಮ ಉತ್ಪನ್ನ ಮೂಲ ಗ್ರಾಹಕರನ್ನು ತಲುಪಲು ಬಲು ಸುಲಭದ ಆದರೆ ಉತ್ತಮ ಮಾರ್ಗವನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ನಿಮ್ಮ ಬೆಲೆಯನ್ನು ಹೆಚ್ಚಿಸುತ್ತದೆ.
ದಿಗಂತ ಮಿಡಿಯಾ ಸೊಲ್ಯೂಷನ್ಸ್ ನಿಮ್ಮ ಸಂಸ್ಥೆ/ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ದೃಶ್ಯ, ಶ್ರವ್ಯ, ಮುದ್ರಣ ಮಾದ್ಯಮ ಮತ್ತು ಹೊರಾಂಗಣ ಮಾದ್ಯಮವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತದೆ.

ನಮ್ಮ ಪ್ರಚಾರ ಸೇವೆಗಳು:
  • ದೃಶ್ಯ,ಶೃವ್ಯ ಮತ್ತು ಮುದ್ರಣ ಮಾದ್ಯಮ ಪ್ರಚಾರ ತಂತ್ರಗಳು
  • ಹೊರಾಂಗಣ ಪ್ರಚಾರ
  • ಗ್ರಾಮೀಣ ಪ್ರಚಾರ
  • ಸ್ಥಳೀಯ ಬ್ರಾಂಡ್ ಪ್ರಚಾರ ತಂತ್ರಗಳು
  • ಉತ್ಪನ್ನ ಬಿಡುಗಡೆ
  • ಬ್ರಾಂಡ್ ಹೆಸರಿಗಾಗಿ ಸಲಹೆ

ಹೆಚ್ಚಿನ ವಿವರಗಳಿಗೆ: digantha media solutions ನೋಡಿ.



  © Blogger template 'A Click Apart' by Ourblogtemplates.com 2008

Back to TOP