ದಿಗಂತ ಮೀಡಿಯಾ ಸೊಲ್ಯೂಷನ್ಸ್ ಕುರಿತು
ದಿಗಂತ ಮೀಡಿಯಾ ಸೊಲ್ಯೂಷನ್ಸ್, ಸಂಪೂರ್ಣ ಮಾಧ್ಯಮ ಸಂಬಂಧಿ ಸಹಾಯವನ್ನು ನೀಡುವ, ಉತ್ತಮ ಅನುಭವೀ ಕೆಲಸಗಾರರನ್ನು ಹೊಂದಿರುವ ಬೆಂಗಳೂರಿನಲ್ಲಿರುವ ಸೇವಾ ಸಂಸ್ಥೆಯಾಗಿದೆ. ಈ ಕಂಪನಿಯು ಎಲ್ಲ ಮಾಧ್ಯಮ ಸಂಬಂಧಿ ಕಾರ್ಯಗಳಲ್ಲೂ ತನ್ನ ಸೇವೆಯನ್ನು ನೀಡುವ ಮೂಲಕ ಕಾರ್ಪೊರೆಟ್ ಮತ್ತು ಇತರೆ ಉದ್ಯಮಗಳಿಗೆ ತಮ್ಮ ಗುರಿಯ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತಿದೆ.
ದಿಗಂತ ಬ್ರಾಂಡ್ ಪ್ರಮೋಷನ್, ಸಾರ್ವಜನಿಕ ಸಂಪರ್ಕ, ದೃಶ್ಯ ಹಾಗೂ ಶ್ರವ್ಯ ಮಾಧ್ಯಮ ಪರಿಕಲ್ಪನೆ, ಪ್ರಚಾರ ಸಹಕಾರ, ಅನುವಾದ, ಭಾಷಾಂತರ ಹಾಗೂ ಮಾಧ್ಯಮ ಮಾನವ ಸಂಪನ್ಮೂಲ ಸೇವೆಯನ್ನು ನೀಡುತ್ತದೆ.
ನಮ್ಮ ವೈಶಿಷ್ಟ್ಯ: ಮಾರುಕಟ್ಟೆಯಲ್ಲಿಯ ವಿವಿಧ ಮಾಧ್ಯಮ ಸಂಬಂಧಿ ಅಗತ್ಯತೆಗಳ ಕುರಿತು ದೀರ್ಘವಾದ ಮಾರುಕಟ್ಟೆ ಸಂಶೋಧನೆಯ ನಂತರ ತನ್ನ ಸೇವೆಯನ್ನು ದಿಗಂತ ಮೀಡಿಯಾ ಸೊಲ್ಯೂಷನ್ಸ್ ಪ್ರಾರಂಭಿಸಿದೆ. ದಿಗಂತದ ಸಂಸ್ಥಾಪಕರಿಗೆ ಗ್ಲೋಬಲೈಸೇಷನ್ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯು ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗೆ ತಕ್ಕಂತೆ ಪರಿವರ್ತಿಸಲು ಪ್ರಯತ್ನಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ. ನಾವು ಅಂತರಾಷ್ಟ್ರೀಯ ಬ್ರಾಂಡ್‌ಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ವೇದಿಕೆಯನ್ನು ಒದಗಿಸಿಕೊಡುವಲ್ಲಿ ಸಹಾಯಕವಾಗುವಂತಹ ಮಾರುಕಟ್ಟೆ ತಂತ್ರಗಳನ್ನು ರೂಪಿಸಿ ಕೊಡುವಲ್ಲಿ ನಿರತರಾಗಿದ್ದೇವೆ.
ನಮ್ಮ ಸೇವೆಗಳು :
- ಬ್ರಾಂಡ್ ಪ್ರಮೋಷನ್ಸ್
- ದೃಶ್ಯ ಮತ್ತು ಶ್ರವ್ಯ ಮಾಧ್ಯಮ ಪರಿಕಲ್ಪನೆಗಳು ಮತ್ತು ಸ್ಕ್ರಿಪ್ಟ್
- ಸಾರ್ವಜನಿಕ ಸಂಪರ್ಕ
- ಅನುವಾದ ಮತ್ತು ಭಾಷಾಂತರ
- ಮಾಧ್ಯಮ ಮಾನವ ಸಂಪನ್ಮೂಲ ಸೇವೆ
ಹೆಚ್ಚಿನ ವಿವರಗಳಿಗೆ: digantha media solutions ನೋಡಿ.
1 comments:
babu tadlagi, bijapur today i m seriously checkout your website, its really very attractive and colourfull.
wish u best of luck.....................................................................
Post a Comment